ಕೂಡ್ಲಿಗಿ ರಾಷ್ಟ್ರೀಯ ಸ್ಮಾರಕಗಳು, ಪ್ರವಾಸಿ ತಾಣಗಳು & ಸಾಂಸ್ಕೃತಿಕ ಪರಂಪರೆ
ರಾಷ್ಟ್ರೀಯ ಸ್ಮಾರಕ ಮಹಾತ್ಮ ಗಾಂಧಿ ಚಿತಾಭಸ್ಮ ಸ್ಮಾರಕ, ಉಜ್ಜಿನಿ ಶ್ರೀ ಮರುಳಸಿದ್ದೇಶ್ವರ ಪೀಠ, ಗೂಡೆಕೋಟೆ ಕರಡಿ ಧಾಮ, ಕೈವಲ್ಯಪುರ ಕ್ಷೇತ್ರ ಹಾಗೂ ಮನೆ ಮನೆಗೆ ಅಭಿಯಾನ.
ಕೂಡ್ಲಿಗಿಯ ೫ ಪ್ರಮುಖ ಪರಂಪರೆ ತಾಣಗಳು & ಸಾರ್ವಜನಿಕ ಅಭಿಯಾನ
ಸಂಪೂರ್ಣ ವಿವರಗಳನ್ನು ವೀಕ್ಷಿಸಲು ಕೆಳಗಿನ ಯಾವುದೇ ಕಾರ್ಡ್ ಮೇಲೆ ಕ್ಲಿಕ್ ಮಾಡಿ:
ಪ್ರವಾಸಿ ತಾಣವಾಗದ ಹುತಾತ್ಮರ ಸ್ಮಾರಕ (ಗಾಂಧಿ ಸೌಧ)

ಇತಿಹಾಸ ಮತ್ತು ಪ್ರಾಮುಖ್ಯತೆ
1948ರ ಫೆಬ್ರವರಿ 12ರಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಚಿತಾಭಸ್ಮವನ್ನು (ಅಸ್ಥಿ) ದೇಶದ ನಾನಾ ಪವಿತ್ರ ನದಿಗಳು ಮತ್ತು ಪುಣ್ಯಕ್ಷೇತ್ರಗಳಿಗೆ ರವಾನಿಸಲಾಗಿತ್ತು. ಅಂದು ಅಂದಿನ ಬಳ್ಳಾರಿ (ಇಂದಿನ ವಿಜಯನಗರ) ಜಿಲ್ಲೆಯ ಕೂಡ್ಲಿಗಿ ಪಟ್ಟಣಕ್ಕೆ ಗಾಂಧೀಜಿಯವರ ಅಸ್ಥಿ ಪೆಟ್ಟಿಗೆಯನ್ನು ತಂದು, ಪಟ್ಟಣದ ಮಧ್ಯಭಾಗದಲ್ಲಿ ಸಾರ್ವಜನಿಕರ ದರ್ಶನಕ್ಕಿಟ್ಟು ಪೂಜಿಸಲಾಯಿತು. ನಂತರ ತುಂಗಭದ್ರಾ ನದಿಯಲ್ಲಿ ವಿಸರ್ಜಿಸಲಾಯಿತು.
ಗಾಂಧೀಜಿಯವರ ಅಸ್ಥಿ ಸ್ಪರ್ಶಿಸಿದ ಈ ಪವಿತ್ರ ಮಣ್ಣಿನ ನೆನಪಿಗಾಗಿ ಕೂಡ್ಲಿಗಿ ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ 'ಹುತಾತ್ಮರ ಸ್ಮಾರಕ'ವನ್ನು (ಗಾಂಧಿ ಸೌಧ) ಸ್ಥಾಪಿಸಲಾಯಿತು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ ಕೂಡ್ಲಿಗಿ ಭಾಗದ ವೀರ ದೇಶಪ್ರೇಮಿಗಳ ಸವಿನೆನಪು ಇಲ್ಲಿದೆ.
ಈ ಚಾರಿತ್ರಿಕ ಸ್ಮಾರಕವನ್ನು ಪ್ರವಾಸಿ ತಾಣವಾಗಿ ಮೇಲ್ದರ್ಜೆಗೇರಿಸಿ, ರಾಷ್ಟ್ರೀಯ ಮಟ್ಟದ 'ಸ್ವಾತಂತ್ರ್ಯ ಪಾರಂಪರಿಕ ಉದ್ಯಾನವನ' (Freedom Heritage Park) ಹಾಗೂ ಗಾಂಧಿ ವಸ್ತುಸಂಗ್ರಹಾಲಯವಾಗಿ ಅಭಿವೃದ್ಧಿಪಡಿಸಲು ಶಾಸಕರಾದ ಡಾ. ಶ್ರೀನಿವಾಸ್ ಎನ್. ಟಿ. ಅವರು ಶ್ರಮಿಸುತ್ತಿದ್ದಾರೆ.
ಹುತಾತ್ಮರ ಸ್ಮಾರಕ (ಗಾಂಧಿ ಸೌಧ) ಪತ್ರಿಕಾ ಪ್ರಕಟಣೆಗಳು & ಅಪರೂಪದ ಫೋಟೋಗಳು
ಗಾಂಧಿ ಅಸ್ಥಿ ಸ್ಮಾರಕದ ದಿನಪತ್ರಿಕೆ ಸುದ್ಧಿಗಳು, ಕಾರ್ಯಕ್ರಮಗಳು ಹಾಗೂ ಪಾರಂಪರಿಕ ದಾಖಲೆಗಳು:



















































